Friday, September 19, 2008

ಸುಮ್ಮನೆ(A hand at poetry)

                                                           ಸುಮ್ಮನೆ




ಜುಳುಜುಳನೆ ಹರಿಯುತಿಹ ನೀರ ಹನಿಗಳಲೆಲ್ಲ ನಿನ್ನ ಮೊಗವೇ ಇಹುದು ಯಾಕೆ ಹೀಗೆ..?

ಕಾಡು ಹಕ್ಕಿಗಳೆಲ್ಲ ಜೊತೆಗೂಡಿ ಹಾಡುತಿರೆ ನಿನ್ನ ಹೆಸರನೆ ಎಲ್ಲ ಅಂದಹಾಗೆ ..


ಕಣ್ಣ ನಾ ಮುಚ್ಚಿರಲು ಮನದ ಬಾನಂಗಳದಿ ಕಣ್ಣ ಮುಚ್ಚಾಲೆ ನೀ ಆಡಿದಂತೆ ..

ಅಡಗಿರುವ ನೀ ಕಳೆದು ಹೋಗಿಹೆ ಇಂದು ಮನದೊಳಗೆ ತುಂಬಿಹುದು ನಿನ್ನದೇ ಚಿಂತೆ ..!


ಚಂದ್ರ ತಾರೆಗಳಲ್ಲಿ ಹುಡುಕುವುದ ನಾನರಿಯೆ ..

ಎಲ್ಲಿಯೇ ಅಡಗಿದರು ನಿನ್ನ ನಾ ಮರೆಯೆ..


ಕೆಂಗುಲಾಬಿಗಳನೆಲ್ಲ ಕಿತ್ತು ತರುವೆನು ಮೆಲ್ಲ ..

ನೀಡುವೆನು ನಿನಗವನು ದಿನವೂ ನಾನೆಲ್ಲ ..


ಸೋಲ ನಾ ಒಪ್ಪಿದರು ಬಳಿ  ಬಾರೆಯೇಕೆ..?

ಬಳಿಬರಲು ನಿನಗೊಂದು ಸಿಹಿಮುತ್ತು ಬೇಕೇ..?


ಯಾಕೆ ಅಡಗಿದೆ ನೀನು ಮನದ ಮಾತದು ಏನು..?

ಕೇಳಲೇ ಕಾದಿರುವೆ ಈ ನಿನ್ನ ನಾನು ...


                                   - ಅಪೂರ್ವ ಚಂದ್ರ .

No comments:

Post a Comment

Hey, did you just want to say something?