Saturday, May 30, 2009

ಸಣ್ಣದೊಂದು ನಶೆ- -हल्का सा इक नशा

ಸಣ್ಣನೆಯ ನಶೆಯೊಂದು ಸುಮ್ಮನೇ ಯೇರಿಹುದು,
ಹಾಗೆಯೇ ಕಣ್ಣಿನಲಿ ಕಾಣದೇ ಮಿಂಚಿಹುದು.

ನಿನ್ನನೆ ನೋಡುತಿರೆ ನನ್ನದೀ ಎದೆಯಿಂದು,
ತನ್ನೊಳಗೆ ಏನೇನೊ ಗುನುಗುತಿಹುದು.

ನನ್ನೆದೆಯ ಭಾವಕ್ಕೆ ಜೀವ ತುಂಬಿದೆ ನೋಡು,
ದೂರವನ್ನು ಕಳೆದೊಗೆದು ಬಳಿ ಬಂದು ಕೂಡು .

ಮೈ ತಣಿಸುವಾ ಈ ಹವೆಇರಲು ಹೀಗೆಂದೂ,
ನನ್ನೊಳಗಿನ ಉತ್ಸಾಹ ಹೆಚ್ಚುತಿದೆ ಇಂದೂ.

ದೂರದಾ ನೋಟದಲಿ ಯೇನಿಹುದು ಖುಷಿಯೇ..?
ಮಾಯೆಯೇ ನೀ ನನ್ನ ಮಿಡಿತದಲಿ ಮಿಡಿಯೇ..!

ಧ್ವನಿಯಲ್ಲಿ ಧ್ವನಿಯಿಟ್ಟು ನನ್ನೆದೆಯೀಗ ನಿನ್ನ
ಕೂಗುತಿದೆ ಜೋರಾಗಿ ಬಳಿ ಬರಲು ಎನ್ನ ....!

--ಅಪೂರ್ವ ಚಂದ್ರ (translation of the Ghazal called "Halka sa ek nasha" sung by Hariharan)

Sunday, May 17, 2009

ಇಷ್ಟ


ಜೀವದಾಗಸದಲ್ಲಿ ನಗುವಿನಾಗರದಲ್ಲಿ ನನ್ನ ನೀ ನಿನ್ನತ್ತ ಸೆಳೆಯುತಿರುವೆ
ಯಾವುದನೂ ಹೇಳದೆಯೇ ಯಾರನೂ ಕೇಳದೆಯೇ ನನ್ನ ಮನವನೆತ್ತಲೋ ನೀ ಒಯ್ಯುತಿರುವೆ .

ಏನ ಹೇಳಲಿ ಕಂದ ನಿನ್ನ ನೋಟವು ಚಂದ,
ಆಡುವಾ ಮಾತುಗಳು ಅಂದಚಂದ.

ನಿನ್ನ ನಾ ನೋಡುತಿರೆ ಜಗವೆಲ್ಲ ಅಂದ ಮನಸುಗಳ ನಡುವಿಹುದು ಕಾಣದಾ ಸಂಬಂಧ .
ಸುಮ್ಮ ಸುಮ್ಮನೆ ಬರುವೆ ನೂರು ನೆನಪನು ತರುವೆ ,ನನ್ನೇಕೆ ಹೀಗೆ ನೀ ಕಾಡುತಿರುವೆ .?

ಅಲ್ಲಿ ನೋಡಲು ನೀನೆ ,ಎಲ್ಲಿ ನೋಡಲು ನೀನೆ ,ಕಾಡುವ ವಿದ್ಯೆಯಲಿ ನೀ ಪ್ರವೀಣೆ !
ನೀ ಮನಕೆ ಬಾರದ ದಿನಗಲೊಂದೂ ಇಲ್ಲ ನಿನ್ನದೇ ನೆನಪಲ್ಲಿ ಕಳೆವೆ ನಾ ದಿನವೆಲ್ಲ.

ಕಣ್ಣೆದುರು ನೀ ನಿಂತು ,ಮನದಲ್ಲಿ ನೀ ಬಂದು ,ಯೋಚನೆಯ ಮಾಡುವುದೇ ನನಗೀಗ ಕಷ್ಟ .
ನಿನ್ನ ಸಿಹಿ ನೆನಪುಗಳು ಕಷ್ಟವಾದರೂ ಇಷ್ಟ ,ಕಾರಣವೂ ತಿಳಿದಿಲ್ಲ ನೀನನಗೆ ಇಷ್ಟ....!!!:-)

--ಅಪೂರ್ವ ಚಂದ್ರ