Friday, September 19, 2008

Peace is the answer

                                                   


                                          THE QUEST

There was a scream ,
no one new that it was end of their dream..!

There was a sound,
but was not sound
There came a light on the ground,
but it wasn't knowledge bound.

Lots died and lots cried,
some were even fried.

No place to hide,
no matter the side.

What makes man so blind...?
why can't he be kind to mankind..?!

                                                    -APOORVA CHANDRA
                                                     (This is my first poem in english)

ಪಯಣ

This is an attempt to translate the song "Boulevard of broken dreams" by GREENDAY into namma kannada.


                                        ಪಯಣ

ನಡೆಯುವೆನು ನಾನೊಂದು ಒಂಟಿ ದಾರಿಯಲಿ ..
ಎಂದಿಗೂ ತಿಳಿದಿರುವ ಅದೇ ಹಾದಿಯಲಿ..


ತಲುಪುವಾ ಜಾಗವದು ತಿಳಿಯದಾದರು ಇಲ್ಲಿ ,
ದಾರಿಯಲ್ಲದೆ ಎನಗೆ ಬೇರೆ ಮನೆಯೆಲ್ಲಿ..?


ನಡೆಯುವೆನು ನಾನೀ ಖಾಲಿ ರಸ್ತೆಯಲಿ ,
ಚೂರಾದ ಕನಸುಗಳ ದೊಡ್ಡ ಕಣಿವೆಯಲಿ .


ಕತ್ತಲಲಿ ರಾತ್ರಿಯಲಿ ಮಲಗಿರಲು ಜಗವೆಲ್ಲ,
ಎದ್ದಿರುವೆ ನಾನೊಬ್ಬ ನಡೆಯುವೆನು ಇರುಳೆಲ್ಲ .


ಜೊತೆಯಲ್ಲಿ ನಡೆಯುತಿದೆ ಬರಿಯ ಪ್ರತಿಬಿಂಬ
ಎದೆ ಬಡಿತಗಳಿವೆ ಮನಸಿನಾ ತುಂಬ ..


ಒಮ್ಮೆ ಯಾರೋ ಎನ್ನ ಕಾಣುವರೆನ್ನುವಾ ತವಕ
ಒಬ್ಬನೇ ನಡೆಯುವೆನು ಅಂದಿನಾ ತನಕ ..


ಮನಸನೆಲ್ಲೋ ವಿಭಜಿಸಿದ ರೆಖೆಯಾ ಮೇಲಿಂದು,
ನಡೆಯುತಿಹೆ ಹಾಗೆಯೇ ಸುಮ್ಮನೆ ನಾನಿಂದು .


ಅಂಚಿನಲ್ಲಿರುವ ಆ ಗಡಿ ರೆಖೆಯಾ ಮೇಲಿಂದು ,
ನಡೆಯುತಿಹೆ ಒಬ್ಬನೇ ಹಾಗೆಯೇ ನಾನಿಂದು .


ರೇಖೆಗಳ ಮಧ್ಯ ನಾ ದೂರದಲಿ ನಿಂತು ,
ಯೋಚಿಸಿದೆ ಜೀವನದ ಸರಿ ತಪ್ಪುಗಳೆಂತು.


ಒಂದೊಮ್ಮೆ ನೋಡು ಬಾ ನಾಡಿ ಮಿಡಿತಗಳನ್ನು ,
ಬದುಕಿರುವೆ ಜೀವನದಿ ನಡೆಯುವೆನು ನಾನಿನ್ನೂ....!
 
                                                   - ಅಪೂರ್ವ ಚಂದ್ರ

ಸುಮ್ಮನೆ(A hand at poetry)

                                                           ಸುಮ್ಮನೆ




ಜುಳುಜುಳನೆ ಹರಿಯುತಿಹ ನೀರ ಹನಿಗಳಲೆಲ್ಲ ನಿನ್ನ ಮೊಗವೇ ಇಹುದು ಯಾಕೆ ಹೀಗೆ..?

ಕಾಡು ಹಕ್ಕಿಗಳೆಲ್ಲ ಜೊತೆಗೂಡಿ ಹಾಡುತಿರೆ ನಿನ್ನ ಹೆಸರನೆ ಎಲ್ಲ ಅಂದಹಾಗೆ ..


ಕಣ್ಣ ನಾ ಮುಚ್ಚಿರಲು ಮನದ ಬಾನಂಗಳದಿ ಕಣ್ಣ ಮುಚ್ಚಾಲೆ ನೀ ಆಡಿದಂತೆ ..

ಅಡಗಿರುವ ನೀ ಕಳೆದು ಹೋಗಿಹೆ ಇಂದು ಮನದೊಳಗೆ ತುಂಬಿಹುದು ನಿನ್ನದೇ ಚಿಂತೆ ..!


ಚಂದ್ರ ತಾರೆಗಳಲ್ಲಿ ಹುಡುಕುವುದ ನಾನರಿಯೆ ..

ಎಲ್ಲಿಯೇ ಅಡಗಿದರು ನಿನ್ನ ನಾ ಮರೆಯೆ..


ಕೆಂಗುಲಾಬಿಗಳನೆಲ್ಲ ಕಿತ್ತು ತರುವೆನು ಮೆಲ್ಲ ..

ನೀಡುವೆನು ನಿನಗವನು ದಿನವೂ ನಾನೆಲ್ಲ ..


ಸೋಲ ನಾ ಒಪ್ಪಿದರು ಬಳಿ  ಬಾರೆಯೇಕೆ..?

ಬಳಿಬರಲು ನಿನಗೊಂದು ಸಿಹಿಮುತ್ತು ಬೇಕೇ..?


ಯಾಕೆ ಅಡಗಿದೆ ನೀನು ಮನದ ಮಾತದು ಏನು..?

ಕೇಳಲೇ ಕಾದಿರುವೆ ಈ ನಿನ್ನ ನಾನು ...


                                   - ಅಪೂರ್ವ ಚಂದ್ರ .