Friday, January 8, 2016

मूँग दाल !

1.

ಇಂದು, ನಿನ್ನೆಯ ಒಡನಾಟಾದಲಿ ಕಳೆಯುತಿದ್ದೆ.
ನಿನ್ನೆಗೇ ಬೇಸರವೆನಿಸಿ ಮುಂದೆ ಹೋಗೆಂದಿತು.
ಇಂದೀಗ ನಿನ್ನೆಯಿಲ್ಲ.

ನಿನ್ನೆಯ ನೆನಪುಗಳ ಖಜಾನೆಯೊಂದರಲಿ ಶಬ್ದವೊಂದು ಸಿಕ್ಕಿತ್ತು.
ಇಂದು ಪ್ರಖರ ಬೆಳದಿಂಗಳು.

**************************************

2.

ಶಿಥಿಲ ಅಡಿಪಾಯದ ಮೇಲೆ ನಿಂತಿರುವ ಕೋಟೆ. 
ಮೇಲಿಂದ ಒಂದೊಂದೇ ಕಲ್ಲುಗಳು ಕೆಳಬಿದ್ದು ಒಬ್ಬೊಬ್ಬರನ್ನಾಗಿ ಕೊಲ್ಲುತ್ತಿವೆ. 
ಉಳಿದವರ ಕಣ್ಣುಗಳಲಿ ಧೂಳು ತುಂಬಿದೆ.

ಧರ್ಮಮಾರ್ಗದಲ್ಲಿ ಸಂಚರಿಸಬೇಕೆಂದರೆ 'ಧರ್ಮದ' ಅವಶ್ಯಕತೆಯೇನೂ ಇಲ್ಲವೆಂಬ ಸತ್ಯವಾಕ್ಯವ ನುಡಿದರೆ ಸ್ವಯಂಘೋಷಿತ ಧರ್ಮರಕ್ಷಕರಾರೂ ಮೆಚ್ಚರು ಮಂಕುತಿಮ್ಮ- ದೇವರಿಲ್ಲದಹಳ್ಳಿVG

**************************************

3.

ಹೇಗೋ ಒಮ್ಮೊಮ್ಮೆ ನಿರ್ಜೀವವವಾಗಿದ್ದ ಮೆದುಳಿನ ಭಾಗವೊಂದು ಅಗ್ನಿಪರ್ವತದಂತೆ ಭೋರ್ಗರೆಯುತ್ತಾ ಸಿಡಿದೆದ್ದು ಶಬ್ದಗಳ ಲಾವಾಪ್ರವಾಹವನು ಹರಿಸಿದಂತೆ!

ಗೋಜಲು ಗೋಜಲಾಗಿ ಬಿದ್ದಿದ್ದ ಹಳೆಯ ಬಟ್ಟೆಗಳ ಶಿಖರದಲ್ಲಿ ಸಿಕ್ಕಿದ ಕೆಂಪು ಬಸ್ಸಿನ ಟಿಕೇಟಿನಲ್ಲಿರುವ 2 ರಂಧ್ರಗಳನ್ನು ಕವಿತೆಯೆನ್ನಬಹುದೇ?

ಶಬ್ದಗಳಿಗೇನೋ ಸಮಯದ ಅಭಾವವಂತೆ.
ಆದರೂ ಇದೇಕೋ ತೋರುತಿದೆ ಬರೀ ನೆಪದಂತೆ.
ಕವಿತೆಯಾದರೆ ಬುದ್ದಿಜೀವಿಗಳು (ಅಪ) ಅರ್ಥ ಕಲ್ಪಿಸುತ್ತಾರೆಂಬ ಭಯವಂತೆ!

ಕನ್ನಡದಲ್ಲಿ ಒಂದೆರಡು ಸಾಲು ಗೀಚಿದೆ.
'ಓ, ಪರವಾಗಿಲ್ಲ, ಚೆನ್ನಾಗೇ ಇದೆ' ಅಂದುಕೊಂಡೆ.
ಇಂಗ್ಲಿಷಿಗೆ ತರ್ಜುಮೆಯೂ ಮಾಡಿದೆ.
ರಾಹುಲ್ ಗಾಂಧಿ ಮಾತನಾಡಿದಂತಾಯಿತು!

ಆಗೀಗ ಹೀಗೆ ಶಬ್ದಗಳು ಕುಣಿಡಾಡಿದಾಗ ಕವಿತೆಯಾಗಬಹುದೇನೋ ಎಂಬ ಹುಚ್ಚು ಬಯಕೆ!

**************************************