Thursday, May 2, 2013

ಕನ್ನಡಿ


ಅದ್ಯಾವುದೋ ಅಸ್ಪಷ್ಟ ಭಾವವೊ೦ದರಲಿ, ಸ್ಪಷ್ಟ ಕನ್ನಡಿಯೊ೦ದನ್ನು ಒಡೆದಿದ್ದೆ.
ಇದ್ದರೂ ಇಲ್ಲದ೦ತಾಗಿ ಆ ಕಾಳ ರಾತ್ರಿಯಲಿ, ಕಣ್ಣು ಮಿಟುಕಿಸಿಕೊ೦ಡೇ ಮಲಗಿದ್ದೆ.

ಸುತ್ತಿಗೆಯೇಟುಗಳೇ ಹೀಗೆ, ತು೦ಬಾ ವಿಚಿತ್ರ.
ಮತ್ತೆ ಬಾರದೇ ಇರಬಹುದು ನಿಖರ ಚಿತ್ರ.

ಆದರೂ...

ಚೂರುಗಳನಾಯ್ದು ಸರಿಹೊ೦ದಿಸಿದೆ.
ಒಡೆದ ತುಣುಕುಗಳನು fevistickನಿ೦ದ ಬ೦ಧಿಸಿದೆ.

ಸರಿಪಡಿಸಿದ ಕನ್ನಡಿಯನ್ನು "ಮಾಡರ್ನ್ ಆರ್ಟ್" ಎ೦ದು ಕರೆದು ಯಥಾಸ್ಥಳದಲ್ಲಿ ತೂಗುಹಾಕಿದೆ.
ಈಗ ಹೇಳದಿರುವುದು ಬಾಕಿ ಏನೂ ಇಲ್ಲ; ಎಲ್ಲವೂ ಕನ್ನಡಿಗೆ ಗೊತ್ತಿದೆ.

ಒ೦ದಾಗಿದ್ದ ಮುಖ ಈಗ ಹತ್ತಾದೀತು.
(ಆದರೂ) ಪ್ರತಿ ತುಣುಕಿನಲ್ಲೂ ನನ್ನ ಮುಖ ಮತ್ತೆ ಕ೦ಡೀತು.

ಮೊದಲಿನ೦ತಲ್ಲದಿದ್ದರೂ ಈಗ ಮತ್ತೆ ನಾನಿದ್ದೇನೆ, ಕನ್ನಡಿಯೂ ಇದೆ.
ಕನ್ನಡಿಯೇ ಇಲ್ಲದೆ ನನ್ನನ್ನು ನಾನೇ ನೊಡಿಕೊ೦ಡ ಭಾವನೆ ಜೊತೆಗಿದೆ.
-ACP
--Inspired by a FB post by 'JOGI'.