Thursday, March 11, 2010
ಒಂಟಿ - "Show me the meaning of being lonely"
ಒಂಟಿಯಾಗಿರುವುದರ ಅರ್ಥವನು ತೋರು,
ಒಡೆದಿರುವ ಹೃದಯಕ್ಕೆ ಶಬ್ದಗಳು ನೂರು,
ಕಡುಗೆಂಪು ಪ್ರೀತಿಯಲಿ ಕಾಣುವುದು ಕ್ಲಿಷ್ಟ ,
ಉಸಿರಾದುವುದನ್ತು ಇನ್ನಷ್ಟು ಕಷ್ಟ,
ನನ್ನೊಡನೆ ನಡೆಯುತಿರು ಇದುವೇ ನನಗಿಷ್ಟ.
ಬೆಳಕಿನ ರಾತ್ರಿಗಳಿಗೀಗ ಸ್ವಾತಂತ್ರದಾ ಹುಚ್ಚು , ಆವೇಶ .
ಪಡೆದೇ ತೀರುವೆವೆಂಬ ರೊಚ್ಚು , ಆಕ್ರೋಶ .
ತಾಕುತಿದೆಯೆನಗೆ ಸೂರ್ಯನಾ ಕಿಚ್ಚು , ಸಶೇಷ .
ಕಿಚ್ಚೆಲ್ಲ ನಾ ತಿಳಿದಂತೆ ಇಲ್ಲ ,
ಫಲಿಸುವುದು ನಿನ್ನ ಆಸೆಗಳು ಎಲ್ಲ ,
ಎನ್ನುವಾ ಸದ್ದೊಂದು ಕೇಳಿಸಿತು ಮೆಲ್ಲ ,
ಸದ್ದಿನಲೇ ಹೀಗೆ ಮಾಯವಾಯಿತಲ್ಲ ??!
ಒಂಟಿಯಾಗಿರುವುದರ ಅರ್ಥವನು ತೋರು ,
ಇದೇನಾ ಜೊತೆ ಬರುವ ಭಾವನೆಯ ತೇರು ?
ನೀನಿರುವ ಕಡೆ ನಾ ಇರಬಾರದೇಕೆ ?
ಹೃದಯದಳದೇನೋ ಕಳೆದುಕೊಂಡು ಒಂಟಿಯಾಗಿದ್ದರೆ ಸಾಕೆ ?
ಕೊನೆಯೇ ಇಲ್ಲವೆಂಬಂತೆ ಮುಂದೋಡುವ ಜೀವನ ,
ಬರಿಯ ಬದಲಾವಣೆಗಳನ್ನವಲೋಕಿಸುವ ಕಲ್ಲು ನಯನ ,
ಕೊನೆಯಿರದ ಪ್ರೀತಿಯ ಕಡೆ ಪಶ್ಚಾತಾಪದ ಪಯಣ ,
ಇದಕೆಲ್ಲಾ ಕೊನೆ ಎಲ್ಲಿ ?? ಶೂನ್ಯ ನಿಯಂತ್ರಣ .!!
ಈಗ ನೀ ನನ್ನ ಜೋತೆಗಿರುವೆಯಲ್ಲಾ ,
ನನಸಾಗುವವು ನಿನ್ನ ಕನಸುಗಳು ಎಲ್ಲಾ .
ನೀನೆಂದೂ ತೋರದ ಭಾವಗಳನೆಲ್ಲಾ,
ನಾ ತೋರಬೇಕೆಂಬುದಷ್ಟು ಸರಿಯಲ್ಲ..
ಓಡಿ ಹೋಗೋಣವೆಂದರೆ ಜಾಗಗಳು ತಿಳಿದಿಲ್ಲ ,
ನನ್ನದೇ ಅನ್ನಲೆನಗೆ ಪರಿಧಿಯೂ ಉಳಿದಿಲ್ಲ ,
ನನ್ನೀ ತನು ಮನ ಎದೆ ಆತ್ಹ್ಮಗಳನೆಲ್ಲ ,
ಅರ್ಪಿಸುವೆ ನಿನಗೆ ಇನ್ನೇನೂ ಉಳಿದಿಲ್ಲ !!
ಹೃದಯದಲ್ಲೇನೋ ಕಳೆದುಕೊಂಡು ಒಂಟಿಯಾಗಿದ್ದರೆ ಸಾಕೆ..?
ನೀನಿರುವ ಕಡೆ ನಾ ಇರಬಾರದೇಕೆ ?? ??
-ACP ( Translation of " Show me the meaning of being lonely " by Backstreet Boys)
Subscribe to:
Posts (Atom)